ಶ್ರಮ ,ಪರಿಶ್ರಮದ , ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಿದಾಗ , ನಮ್ಮ ನೆರಳು ಹಾಗೂ ನಮ್ಮ ಆತ್ಮವಿಶ್ವಾಸವೇ ನಮಗೆ ಧೈರ್ಯವನ್ನು ನೀಡುತ್ತದೆ , ಎತ್ತರದಲ್ಲಿ ಇರು ನಡೆ ನುಡಿಯಲ್ಲಿ ಗುಣದಲ್ಲಿ ,ಪ್ರೀತಿಗೆ ಪಾತ್ರರಾಗುತ್ತಾರೆ ನಮ್ಮನ್ನು ಪ್ರೀತಿಸುವರು, ಏನೇ ಆಗಲಿ ನಿನ್ನ ನೀನೂ ಇಲ್ಲಿ ಮೊದಲು ಗೆಲ್ಲು , ಎಲ್ಲರೂ ನಿನ್ನವರಲ್ಲ ಎಲ್ಲರೂ ನಿನ್ನ ಮಿತ್ರರಲ್ಲ , ಸಮಯ ಬಂದಾಗ ಅವರ ಅವರ ಪಾತ್ರ ಅವರು ನಟಿಸಿದಾಗ ನಮಗೆ ತೋರಿಸಿದಾಗ ಅದೇ ನಮಗೆ ಅರ್ಥವಾಗುತ್ತದೆ ... ಎಲ್ಲರನ್ನೂ ಪ್ರೀತಿಸು ಆದರೆ ಯಾರನ್ನ ಎಲ್ಲಿ ಇಡಬೇಕು ಅಲ್ಲಿ ಇಡು ,, ಅತಿಯಾದ ಸಿಹಿ ಅತಿಯಾದ ಕಹಿ ಇವೆರಡನ್ನೂ ಪ್ರಪಂಚ ಎಂದಿಗೂ ನುಂಗುವುದಿಲ್ಲ , ಅತಿ ಸಿಹಿಯಾಗಬೇಡ ಪ್ರಪಂಚ ನಿನ್ನನ್ನು ನುಂಗಿಬಿಡುತ್ತದೆ , ಅತಿಯಾದ ಕಹಿ ಆಗಬೇಡ ಪ್ರಪಂಚ ನಿನ್ನನ್ನೂ ಉಗಿದುಬಿಡುತ್ತದೆ,,, ಒಮ್ಮೊಮ್ಮೆ ಯಾರು ಹೇಳದ ಬುದ್ಧಿವಾದವನ್ನು ನಮ್ಮ ಒಂಟಿತನವೆ ಹೇಳಿಕೊಡುತ್ತದೆ ... ನಿನ್ನ ಇಷ್ಟಕ್ಕೆ ಬದಲಾದೆ ನಾನು ನೀನೇ ಬದಲಾದ ಮೇಲೆ ನಾನು ಬದಲಾಗಿದ್ದು ಏನು ಮಾಡಲಿ , ನಿನ್ನ ಮೇಲೆ ಮನಸಲ್ಲಿ ಪ್ರೀತಿ ಇದೆ ,, ನಿಮ್ಮೊಂದಿಗೆ ಮಾತನಾಡಲು ನನ್ನಲ್ಲಿ ಸಾಕಷ್ಟು ಸಮಯವಿದೆ ,ಆದರೆ ನಿಮ್ಮೊಂದಿಗೆ ಮಾತನಾಡಬೇಕು ಎಂಬ ಭಾವನೆ ಸತ್ತುಹೋಗಿದೆ ... ಮುಗಿದು ಹೋದ ಅಧ್ಯಾಯವನ್ನು ಪುನಃ ಓದುವ ಆಸೆ ನನ್ನಲ್ಲಿಲ್ಲಾ , ಆದರೆ ಓದಿದ ಅಧ್ಯಾಯದಲ್ಲಿ ಬರುವ ಎಲ್ಲ ನನ್ನೆಲ್ಲಾ ಪ್ರಶ್ನೆಗಳಿಗೆ ನೀನೇ ಉತ್ತರ , ನಾನು ಒಬ್ಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದು , ಸಹ ಮೌನಿಯಾಗಿದ್ದು ,ಒಂದು ಬಿಡಿಸಲಾಗದ ಹೇಳಲಾಗದ ಹಾಗೂ ನನ್ನಿಂದ ನಿನಗೆ ಕೇಳದ ಒಂದು ಪ್ರಶ್ನೆ ಎದೆಯಲ್ಲಿ ಇನ್ನೂ ಸಹ ಜೀವಂತವಾಗಿದೆ , ಅದು ನಿನಗೆ ಅರ್ಥವಾಗದೆ ಇರಬಹುದು ಆದರೆ ಅದರ ನೀವು ದುಃಖ ಪಡುತ್ತಿರುವ ಹೃದಯಕ್ಕೆ ಮಾತ್ರ ಗೊತ್ತು , ನೂರುಕಾಲ ಬಾಳುವ ಜೀವನಕ್ಕೆ ಅರ್ಥ ಸಿಗುವಂತೆ ಬಾಳು ,ಅರ್ಥ ಮಾಡಿಕೊಂಡ ವ್ಯಕ್ತಿಯ ಮನಸ್ಸು ಬೆಳೆಸುವುದು ಉಳಿಸುವುದು ನಿನ್ನಿಂದ ಮಾತ್ರ ಸಾಧ್ಯ ,ನಂಬಿದವರಿಗೆ ಮೋಸ ಮಾಡಬೇಡ , ಏಕೆಂದರೆ ನಂಬಿದ ಮನಸ್ಸು ತನಗೆ ತಾನು ನಂಬುವುದಕ್ಕಿಂತ ನಿನ್ನನು ಹೆಚ್ಚಾಗಿ ನಂಬಿರುತ್ತಾನೆ ...ಪ್ರಪಂಚ ಮನುಷ್ಯನಿಗೆ ದೊಡ್ಡದು ಹಾಗೆ ಚಿಕ್ಕದು ಸಹ ಕೆಲವರಿಗೆ ಪ್ರಪಂಚ ಸುತ್ತಿದರೂ ಪ್ರೀತಿ ತಿಳಿಯುವುದಿಲ್ಲ , ಆದ್ರೆ ಪ್ರೀತಿ ತಿಳಿದವ,,,ನಿಗೆ. ಪ್ರೀತಿಗಿಂತ ಪ್ರಪಂಚವೇ ಇಲ್ಲ , ಕವಿಗಾರ ಬರಹಗಾರ ನಾನಲ್ಲ , ಆದರೂ ಮನಸ್ಸಿಂದ ಗೀಚಿದೆ ಏರಡು ಪದದ ಸಾಲು , ಆದರೆ ಇದರಲ್ಲಿ ಎಲ್ಲವೂ ಸೇರಿಕೊಂಡಿದೆ ಅರ್ಥಗಳು , ನನ್ನ ಹಾಡು ನನ್ನದು , ನನ್ನ ರಾಗ ನನ್ನದು ,ನನ್ನ ತಾಳ ನನ್ನದು ,ಎಂದೆಂದಿಗೂ ಎಲ್ಲೆಲ್ಲಿಯೂ ನನ್ನಂತೆ ನಡೆವೆನು ನುಡಿವೆನು ದುಡಿವೆನು ಇರುವೆನೂ ಈ ಬಾಳಲಿ... 😊😊😊 #art #writersofindia #translator 🚶 #alonequotes
5